Saturday, January 24, 2009

ವನಸುಮ

ವನಸುಮದೊಲೆನ್ನ ಜೀ
ವನವು ವಿಕಸಿಸುವಂತೆ
ಮನವನನುಗೊಳಿಸು ಗುರುವೇ-ಹೇ ದೇವ

ಜನಕೆ ಸಂತಸವೀವ
ಘನನು ನಾನೆಂದೆಂಬ
ಎಣಿಕೆ ತೋರದೆ ಜಗದ ಪೊಗಳಿಕೆಗೆ ಬಾಯ್ ಬಿಡದೆ

ಕಾನನದಿ ಮಲ್ಲಿಗೆಯು
ಮೌನದಿಂ ಬಿರಿದು ನಿಜ
ಸೌರಭವ ಸೂಸಿ ನಲವಿಂ
ತಾನೆಲೆಯ ಪಿಂತಿರ್ದು
ದೀನತೆಯ ತೋರಿ ಅಭಿ
ಮಾನವನು ತೊರೆದು ಕೃತಕೃತ್ಯತೆಯ ಪಡೆವಂತೆ

ಉಪಕಾರಿ ನಾನು ಎ
ನ್ನುಪಕೃತಿಯು ಜಗಕೆಂಬ
ವಿಪರೀತ ಮತಿಯನಳಿದು
ವಿಪುಲಾಶ್ರಯವನೀವ
ಸುಫಲ ಸುಮ ಭರಿತ ಪಾ
ದಪದಂತೆ ನೈಜಮಾದೊಳ್ಪಿಂ ಬಾಳ್ವವೊಲು
ಡಿ.ವಿ.ಜಿ.


ಇದು ನನಗಿಷ್ಟವಾದ ಡಿ.ವಿ.ಜಿ. ಯವರ ಪದ್ಯ..ಕಾಡುಮಲ್ಲಿಗೆಯಂತೆ, ಸುವಾಸನೆಯನ್ನು ಮಾತ್ರ ಆನಂದಿಸುವಂತೆ ಜಗಕ್ಕೆ ಕೊಟ್ಟು ತಾನು ಮರೆಯಲ್ಲಿರಬೇಕೆನ್ನುವುದು ಕವಿತೆಯ ಆಶಯ.ಇದನ್ನು ನನ್ನ ಬ್ಲಾಗಿನ ಅಡಿಬರಹವನ್ನಾಗಿಸಿದ್ದೇನೆ.

4 comments:

  1. ಉಷಾ,
    ನಿಮ್ಮ ಬ್ಲಾಗ್ ಚೆನ್ನಾಗಿದೆ. ಉದ್ಯೋಗಸ್ಥ ಮಹಿಳೆ ನಿಜಕ್ಕೊ ಸರಿ... ಮಹಿಳೆ ಮನೆಯಲ್ಲಿದ್ದೇ ತುಂಬಾ ಕೆಲಸ ಮಾಡುತ್ತಾರೆ.. ನೀವು ಬರೆದ ಅಮ್ಮ ಮಗನ ಸಂಭಾಷಣೆ ತುಂಬಾ ಚೆನ್ನಾಗಿದೆ... ಈಗೆಲ್ಲಾ ಬದಲಾವಣೆ ಬಯುಸುತ್ತಾರೆ ಅಲ್ಲವೇ..? ಹ ಹಾ ಹಾ..
    ಡಿ.ವಿ.ಜಿ ಯವರ ಕವನದ ಸಾಲುಗಳು ಎಲ್ಲರಿಗು ಇಷ್ಟವಾಗುವಂತಹವು...
    ನೀವು ಅವರ ಕವನದಲ್ಲೇ ಅಡಿಬರಹ ಹುಡುಕಿಬಿಟ್ಟಿರಲ್ಲಾ ಸೂಪರ್!!! ತುಂಬಾ ಇಷ್ಟವಾಯಿತು...
    ಮುಂದುವರಿಯಲಿ ನಿಮ್ಮ ಬರಹಗಳು....
    ವಂದನೆಗಳು
    ಮನಸು
    ಕುವೈತ್

    ReplyDelete
  2. ಉಷಾ ಮೇಡಮ್,

    ಅನಿಲ್ ಬ್ಲಾಗಿನಿಂದ ನಿಮ್ಮ ಬ್ಲಾಗಿಗೆ ಬಂದೆ..

    ತುಂಬಾ ದಿನವಾಗಿತ್ತು ಡಿ.ವಿ.ಜಿ ಯವರ ಕವನವನ್ನು ಓದಿ ಖುಷಿಯಾಯಿತು.
    ಬಿಡುವಾದಾಗ ನನ್ನ ಬ್ಲಾಗಿಗೂ ಬನ್ನಿ...
    http://chaayakannadi.blogspot.com/
    ಧನ್ಯವಾದಗಳು

    ReplyDelete
  3. ಮನಸುರವರಿಗೆ ಧನ್ಯವಾದಗಳು. ಕಾರಣಾಂತರಗಳಿಂದ ಬ್ಲಾಗನ್ನು ನೋಡಿರಲಿಲ್ಲ.ಪ್ರತಿಕ್ರಿಯೆ ತಡವಾಯಿತು.ಪ್ರೋತ್ಸಾಹ ಹೀಗೆ ಮುಂದುವರಿಯಲಿ.

    ReplyDelete
  4. ಶಿವುರವರಿಗೆ ಧನ್ಯವಾದಗಳು.ನಾನು ಮೊದಮೊದಲು ಭೇಟಿಕೊಟ್ಟ ಬ್ಲಾಗುಗಳಲ್ಲಿ ನಿಮ್ಮದೂ ಒಂದು.ನಿಮ್ಮ ದಿನಪತ್ರಿಕೆಗಳನ್ನು ಹಂಚುವಾಗಿನ ಅನುಭವಗಳು ತುಂಬಾ ಚೆನ್ನಾಗಿವೆ.

    ReplyDelete