Monday, November 14, 2022

ಪುಟಾಣಿ ಮಕ್ಕಳ Bed Time ಕಥೆಗಳು

ನನ್ನ ಹೊಸ ಪ್ರಯತ್ನ. ದಯವಿಟ್ಟು ನೋಡಿ ಪ್ರೊತ್ಸಾಹಿಸಿ ಗಣೇಶನಿಗೆ ಬಸ್ಕಿ ಹೊಡ್ಯೋದ್ಯಾಕೆ. ಪುಟಾಣಿ ಮಕ್ಕಳ Bed Time ಕಥೆಗಳು -1 https://youtu.be/hQiOl-4IhvY ಕರ್ಣನನ್ನೇ ಏಕೆ ದಾನಶೂರನೆಂದು ಕರೆಯುತ್ತಾರೆ?. ಪುಟಾಣಿ ಮಕ್ಕಳ Bed Time ಕಥೆಗಳು - 2 https://youtu.be/faLkrfszEX8 ಜಾಣ ನರಿ ಮೊಸಳೆಯಿಂದ ಪಾರಾಗಿದ್ದು ಹೇಗೆ ? ಪುಟಾಣಿ ಮಕ್ಕಳ Bed Time ಕಥೆಗಳು - 3 https://youtu.be/OdjjOV-7yIU

Tuesday, November 1, 2022

https://www.youtube.com/channel/UCBHp4PRL19Bg4eY6-YEMC-Q nanna you tube channel

Wednesday, October 26, 2022

ಪುಟ್ಟಿಯ ಬಾಲ್ಯ ಬೊಂಬೆ ಹಬ್ಬ ನವರಾತ್ರಿ ಬಂತು. ಬೊಂಬೆ ಜೋಡಿಸಬೇಕು. ಹೆಣ್ಣು ಮಕ್ಕಳು ಮದುವೆ ಮಾಡಿಕೊಂಡು ಹೋಗಿದಾರೆ. ಮಗನಿಗೆ ಕೆಲಸ. ಯಜಮಾನರೊಂದಿಗೆ ಕಾರ್ಡ್ ಬೋರ್ಡ್ ಬಾಕ್ಸಿನಿಂದ ಬೊಂಬೆ ತೆಗೆದು ಜೋಡಿಸುತ್ತಿದ್ದ ರತ್ನಳ ಮನ ಬಾಲ್ಯಕ್ಕೋಡಿತು. ಬೆಳ್ಳಿಯಂತೆ ಹೊಳೆಯುವ ಜರಿಯ ಬಾರ್ಡರ್ ಇದ್ದ ಆಕಾಶ ನೀಲಿ ಬಣ್ಣದ ಸ್ಕರ್ಟ್, ಪಫ್ ತೋಳಿನ ಬಿಳಿ ರವಿಕೆ ತೊಟ್ಟು ಹಾಲಿನ ಮಧ್ಯದಲ್ಲಿದ್ದ ದೊಡ್ಡ ಕರಿ ಪೆಟ್ಟಿಗೆಯ ಪಕ್ಕ ಕುಳಿತ ಪುಟ್ಟಿ ಅದರಲ್ಲಿದ್ದ ಬೊಂಬೆಗಳನ್ನು ಮುಟ್ಟಲು ಹಾತೊರೆಯುತ್ತಿದ್ದಳು. ಪೆಟ್ಟಿಗೆಯ ಒಂದು ಬದಿಯಲ್ಲಿ ಮುಚ್ಚಳವಿದ್ದ ಖಾನೆ. ಅದರಲ್ಲಿ ಮಣಿಸರಗಳು, ಶೆಟ್ಟಿಯ ಬಳೆ ಮಲ್ಹಾರ, ಓಲೆ ಝುಮುಕಿಗಳು ಮಣಿಗಳಿಂದ ಮಾಡಿದ ಬಳೆಗಳು ಇತರ ಅಲಂಕಾರದ ವಸ್ತುಗಳು ಇದ್ದವು. ಅಮ್ಮ ಒಂದೊಂದೇ ಬೊಂಬೆಯನ್ನು ನಾಜೂಕಾಗಿ ತೆಗೆದಿರಿಸುತ್ತಿದ್ದಾರೆ. ಅಜ್ಜಿ ಬೊಂಬೆಗಳನ್ನು ತಿರುಗಿಸಿ ನೋಡಿ, ಯಾವುದಕ್ಕೆ ಅಲಂಕಾರ ಬೇಕೆಂದು ಹೇಳುತ್ತಿದ್ದರೆ. ಚಿಕ್ಕಕ್ಕ ದೊಡ್ಡಕ್ಕ ಇಬ್ಬರೂ ಸೂಜಿ ದಾರ, ಬಣ್ಣದ ಕಾಗದ ಗೋಂದು, ನಕ್ಕಿ ಎಲ್ಲಾ ಇಟ್ಟುಕೊಂಡು ಬೊಂಬೆಯ ಅಲಂಕಾರಕ್ಕೆ ಸಿದ್ಧರಾಗಿದ್ದಾರೆ. ಪುಟ್ಟಿ ತಾನು ದಿನಾ ಆಡುತ್ತಿದ್ದ ಕೈ ಮುರಿದ ಬೆತ್ತಲೆ ಬೊಂಬೆ ಇಟ್ಟುಕೊಂಡು, ತನ್ನ ಬೊಂಬೆಗೆ ಫಸ್ಟ್ ಡ್ರೆಸ್ ಮಾಡು ಅಂತ ಕಾಡುತ್ತಿದ್ದಾಳೆ. ಅಕ್ಕ ಒಂದು ಜೋಡಿ ಬೊಂಬೆಗೆ ಪುಟ್ಟಿಗೆ ಹೊಲಿದು ಮಿಕ್ಕಿದ್ದ ಬಟ್ಟೆಯಲ್ಲಿ ಪಂಜಾಬಿ ಡ್ರೆಸ್ ಹೊಲೆದಳು. ಬೊಂಬೆಗೆ ಸಾಂಪ್ರದಾಯಿಕವಾಗಿ ಸೀರೆ ಉಡಿಸಿದರೇನೆ ಚಂದ ಅಂತ ಅಜ್ಜಿಯ ಅನಿಸಿಕೆ. ಹೊಸದಾಗಿ ಹೊಲಿಯಕ್ಕೆ ಕಲಿತಿದಾಳೆ ಇರ್ಲಿ ಬಿಡಿ, ಹೇಗೂ ಉಳಿದ ಜೋಡಿಗಳಿಗೆಲ್ಲಾ ಸೀರೆನೇ ಉಡಿಸಿದೆಯಲ್ಲಾ- ಅಮ್ಮನ ಸಪೋರ್ಟ್. ಪಂಜಾಬಿ ಡ್ರೆಸ್ ಹಾಕಿದ್ದ ಜೋಡಿಯನ್ನು ತೋರಿಸಿ ನೀನು ನಿನ್ನ ಗಂಡ ಅಂತ ಚಿಕ್ಕಕ್ಕ ಪುಟ್ಟಿಯನ್ನು ರೇಗಿಸಿದಳು. ಅದು ನಾನಲ್ಲ- ಪುಟ್ಟಿ ಮುಖ ಊದಿಸಿದಳು. ನೋಡು ನೋಡು ಬಟ್ಟೆನೂ ನಿಂದೆ ಬಣ್ಣಾನೂ ನಿಂದೆ. ಉತ್ತರ ಕೊಡಲು ಹೊರಟ ಪುಟ್ಟಿಯ ಗಮನ ಬಟ್ಟೆಯ ಬ್ಯಾಗಿಂದ ಅಮ್ಮ ತೆಗೆದ ಪಿಂಗಾಣಿ ಸಾಮಾನುಗಳ ಕಡೆ ಹೊರಳಿತು. ಹಾಲು ಬಣ್ಣದ ಟೀ ಮತ್ತು ಡಿನ್ನರ್ ಸೆಟ್, ಅದಕ್ಕೆ ಅಂಚಲ್ಲೆಲ್ಲಾ ಕೆಂಪು ಹಸಿರು ಬಣ್ಣಗಳಿಂದ ಹೂ ಬಳ್ಳಿಗಳನ್ನು ಬಿಡಿಸಲಾಗಿತ್ತು. ಮುದ್ದಾದ ನಾಯಿ ಬೆಕ್ಕು, ಆನೆ, ಕುದುರೆಗಳ ಜೋಡಿ ಬೊಂಬೆಗಳು. ನೀಲಿ ಕೆಂಪು ಬಣ್ಣದಿಂದ ಅಲಂಕೃತಗೊಂದ ಸಿಂಹ, ಅದರ ತಲೆಯ ಮೇಲಿನ ತೂತುಗಳಲ್ಲಿ ಊದುಕಡ್ಡಿ ಸಿಕ್ಕಿಸಬಹುದಿತ್ತು. ಹುಲಿ, ಸಿಂಹ, ನಾಯಿ, ಆನೆ, ಎತ್ತುಗಳ ಮಣ್ಣಿನ ಬೊಂಬೆಗಳು. ಶೆಟ್ಟಿ ಮತ್ತು ಶೆಟ್ಟಮ್ಮರ ದಢೂತಿ ಬೊಂಬೆಗಳು. ಹಿತ್ತಾಳೆಯ ಒಲೆ, ಬಾಂಡಲಿ, ಇಡ್ಲಿ ಪಾತ್ರೆ, ಚೊಂಬು, ಬಿಂದಿಗೆ ಇತರ ಅಡುಗೆಮನೆ ಸಾಮಾನುಗಳು. ಬಳಪದ ಕಲ್ಲಿನ ಮರಿಗೆ, ಒರಳು, ಅಳುಗುಳಿಮನೆ ಇತರ ಸಾಮಾನುಗಳು. ಜೊತೆಗೆ ಮನಸೂರೆಗೊಳ್ಳುವ ಚನ್ನಪಟ್ಟಣದ ಬಣ್ಣದ ಬೊಂಬೆಗಳು. ಬಾವಿ, ಹುಡುಗ, ಹುಡುಗಿ, ನೀರು ಹೊತ್ತ ಮಹಿಳೆ, ಪಾತ್ರೆಗಳು, ಒಂದೇ ಎರಡೇ ಅದೇ ಒಂದು ಸುಂದರ ಲೋಕ. ಬೊಂಬೆ ಜೋಡಿಸಿದ ಮೇಲೆ ಮುಟ್ಟಬಾರದು- ಅಮ್ಮ ಪದೇ ಪದೇ ಪುಟ್ಟಿಗೆ ಹೇಳುತ್ತಿದ್ದರು. ಸತ್ಯವಾಗ್ಲೂ ಮುಟ್ಟಲ್ಲ ಅಂತ ಪುಟ್ಟಿ ಭಾಷೆ ಕೊಟ್ಟಳು. ಮನಸ್ಸಿನಲ್ಲಿ ಸತ್ಯಕ್ಕೆ ಅ ಸೇರಿಸಿಕೊಂಡಳು. ಪುಟ್ಟಿಗೆ ಕಣ್ಣೆಳೆಯತೊಡಗಿತು. ಹೋಗಿ ಮಲಗಿದಳು. ಬೆಳಿಗ್ಗೆ ಏಳುವ ಹೊತ್ತಿಗೆ ಅಲಂಕೃತಗೊಂಡ ಬೊಂಬೆಗಳನ್ನು ಜೋಡಿಸಲಾಗಿತ್ತು. ಎಲ್ಲೆಲ್ಲಿ ಯಾವ ಯಾವ ಯಾವ ಬೊಂಬೆ ಇದೆ ಅಂತ ಪುಟ್ಟಿ ಕಣ್ಣಲ್ಲೇ ಫೋಟೋ ಕ್ಲಿಕ್ಕಿಸಿದಳು. ಇವತ್ತಿನ ಬೊಂಬೆ ಬಾಗಿನ ಏನು ಅಂತ ಅಮ್ಮನನ್ನು ಕೇಳಲು ಅಡಿಗೆ ಮನೆಗೆ ಹೋದಳು. ಮೈಸೂರು ದಸರಾಗೆ ಹೋಗಿದ್ದಾಗ ಅಪ್ಪ ತೆಗೆಸಿಕೊಟ್ಟಿದ್ದ ಕೀ ಕೊಟ್ಟರೆ ಕಂಬಿಯ ಮೇಲೆ ಕೆಳಗೆ ಜಾರುವ ಕೋತಿ- ಅದನ್ನು ನೋಡಿ ಚಿಕ್ಕಕ್ಕ ಕೋತಿ ಕೈಯಲ್ಲಿ ಕೋತಿ ಅಂತ ನಕ್ಕಿದ್ದು- ಅಪ್ಪನ ಆಫೀಸಿನ ಎಲ್ಲಾ ವಾಹನಗಳನ್ನು ಕಣದಲ್ಲಿ ನಿಲ್ಲಿಸಿ ಪೂಜೆ ಮಾಡಿದ ನಂತರ ಊರಿನ ಎಲ್ಲಾ ಮಕ್ಕಳು ಅದರಲ್ಲಿ ಕುಳಿತು ಹೋ ಎಂದು ಕಿರುಚುತ್ತಾ ಸುತ್ತಮುತ್ತಲಿನ ಊರುಗಳಿಗೆ ರೌಂಡ್ ಹೋಗುತ್ತಿದ್ದುದು. ವಿಜಯದಶಮಿಯ ಮಾರನೇ ದಿನ ಪೇಪರ್ ನಲ್ಲಿ ಬರುತ್ತಿದ್ದ ಅಂಬಾರಿ ಮತ್ತು ಇತರ ದೃಶ್ಯಗಳು.- “ಅಜ್ಜಿ ಆ ಕಡೆ ಅಜ್ಜಿ ಆ ಕಡೆ“ ಮೊಮ್ಮಗನ ದನಿ ಕೇಳಿ ರತ್ನ ನೆನಪಿನ ಮೆರವಣಿಗೆಯಿಂದ ಹೊರ ಬಂದಳು. ಮಗಳು ವಿಡಿಯೋ ಕಾಲ್ ಮಾಡಿದ್ದಳು. ಉಷಾ ರಮೇಶ್

Wednesday, June 29, 2022

ನಾನು ಅಮ್ಮನಾಗಲೇ ಇಲ್ಲ ನೀನು ಹುಟ್ಟಿದಾಗ ನೀನು ದೇವರು ನನಗೆ ಕೊಟ್ಟ ವರಪ್ರಸಾದವಾದೆ ನಾನು ಭಕ್ತಳಾಗಿ ಸ್ವೀಕರಿಸಿದೆ. ನಾನು ಅಮ್ಮನಾಗಲೇ ಇಲ್ಲ ನಂತರ ನೀನು ನನಗೆ ಸಿಕ್ಕ ಅಪರೂಪದ ಆಟಿಕೆಯಾದೆ ನನ್ನ ಮನರಂಜನೆಯ ಸಾಧನವಾದೆ. ನಾನು ಅಮ್ಮನಾಗಲೇ ಇಲ್ಲ. ನೀನು ಬೆಳೆದ ಹಾಗೆ ನಾನು ನಿನ್ನ ಶಿಕ್ಷಕಿಯಾದೆ ನೀನು ಗುರುವನ್ನು ಮೀರಿಸುವ ಶಿಷ್ಯನಾದೆ ನಾನು ಅಮ್ಮನಾಗಲೇ ಇಲ್ಲ. ದಿನ ಕಳೆದಂತೆ ನಾನು ಬೆಂಬಲ ಬೇಡುವ ಅಸಹಾಯಕಳಾದೆ ನೀನು ಆರೈಕೆ ಮಾಡುವ ತಾಯಿಯಾದೆ ನಾನು ಅಮ್ಮನಾಗಲೇ ಇಲ್ಲ. ಈಗ ನಾನು ಅದು ಬೇಕು ಇದು ಬೇಕು ಎಂದು ಬೇಡುವ ಮಗುವಾದೆ ನೀನು ಎಲ್ಲವನ್ನೂ ಒದಗಿಸುವ ತಂದೆಯಾದೆ. ಕೊನೆಗೂ ನಾನು ಅಮ್ಮನಾಗಲೇ ಇಲ್ಲ.