Sunday, March 24, 2019

ಮನೋಲಹರಿ--ಮನಸ್ಸಿಗೆ ಬಂದಿದ್ದೆಲ್ಲಾ ಇನ್ನಷ್ಟು ಟಿವಿ ಟಿವಿ ಬಂದ ಹೊಸದರಲ್ಲಿ ನ್ಯೂಸ್ ರೀಡರ್ ಒಬ್ಬರು ಹಸುವಿನ ಕತ್ತಿಗೆ ಕಟ್ಟುವ ಗಂಟೆಯಂತದ್ದನ್ನು ಸರದಂತೆ ಹಾಕಿಕೊಂಡಿದ್ದು ನೋಡಿ ಅಣ್ಣ ನಕ್ಕಿದ್ದು ನೆನಪಿದೆ. ನಮ್ಮ ಹರಿಕತೆಯಂತೆಯೇ ಅನಿಸಿದ ಪಾಂಡವಾನಿ ಕಲೆ , ಇನ್ನೂ ಹಲವಾರು ಜನಪದ ಕಲಾ ಪ್ರಕಾರವನ್ನು ಭಾರತ್ ಉತ್ಸವದಲ್ಲಿ ನೋಡಿ ಆನಂದಿಸಿದ್ದು ಸವಿಸವಿ ನೆನಪು. ಆಗ ಪ್ರಸಾರವಾಗುತ್ತಿದ್ದ ಎಲ್ಲಾ ಆಟಗಳನ್ನು ನೋಡುತ್ತಿದ್ದುದು, ಒಂದು ಡೇವಿಸ್ ಕಪ್ ಮ್ಯಾಚ್ ನಲ್ಲಿ ಆ ಪಾಯಿಂಟ್ ಸೋತರೆ ಮ್ಯಾಚನ್ನೇ ಸೋಲುತ್ತಿದ್ದ ವಿಜಯ್ ಅಮೃತರಾಜ್ ಆ ಪಾಯಿಂಟ್ ಗೆದ್ದು ಹಾಗೇ ಗೆಲ್ಲುತ್ತಾ ಇಡೀ ಮ್ಯಾಚನ್ನೇ ನಾನು ಟೆನಿಸ‍್ ಆಟದ ಅಭಿಮಾನಿಯಾಗುವಂತೆ ಮಾಡಿತು. ನಾನೂ ವಾಕಿಂಗ್ ಗೆ ಹೋಗಿದ್ದೆ ನಾವು ಈಗಿರುವ ಮನೆಗೆ ಬಾಡಿಗೆಗೆ ಬಂದಾಗ, ಮನೆ ಹತ್ತಿರಾನೇ ಪಾರ್ಕ್ ಇದೆ. ದಿನಾ ವಾಕಿಂಗ್ ಹೋಗ್ಬಹುದು ಅಂದುಕೊಂಡೆ. ಧೃಢ ನಿರ್ಧಾರ ಮಾಡಿ ಪಾರ್ಕಿಗೆ ಹೋಗಲು ಒಂದೆರಡು ವರ್ಷವಾಯಿತು. ಅವತ್ತು ಬೇಸಿಗೆ ರಜೆ ಇತ್ತು. ನನ್ನ ಮಗ ಜಾಗಿಂಗ್ ಮಾಡ್ತೀನಿ ಅಂತ ಬಂದ. ಇಬ್ಬರೂ ಭಾರಿ ಸಂಭ್ರಮದಿಂದ ಪಾರ್ಕಿಗೆ ಹೋಗಿ ಬಂದೆವು. ಸ್ವಲ್ಪ ಹೊತ್ತಿಗೇ ಹಿರಿಯರೊಬ್ಬರ ಮರಣದ ಸುದ್ದಿಬಂತು. ಇನ್ನೊಂದೆರಡು ವರ್ಷದ ನಂತರ ಮತ್ತೆ ವಾಕಿಂಗ್ ಹೊರಟೆದ್ವಿತೀಯ ವಿಘ್ನ ಆಗಬಾರದು ಅಂತ ಮಾರನೆಯ ದಿನ ಅದೇ ಸಮಯಕ್ಕೆ ಹೊರಟೆ. ಪಾರ್ಕಿನ ಬಳಿ ಹಣ್ಣು ತರಕಾರಿ ಹೂ ಮಾರುವ ವ್ಯಾಪಾರಿಗಳು ಕಾಣಲಿಲ್ಲ. ಒಂದಿಬ್ಬರು ಪಾರ್ಕಿನ ಗೇಟಿಗೆ ತಗುಲಿಸಿದ್ದ ಬೋರ್ಡ್ ನೋಡುತ್ತಿದ್ದರು. ಹತ್ತಿರ ಹೋಗಿ ನೋಡಿದರೆ ಬೋರ್ಡಿನ ಬರಹ ಕಾಣಿಸಿತು. "ದುರಸ್ತಿಗಾಗಿ ಮುಚ್ಚಲಾಗಿದೆ" ಹಲವು ವರ್ಷಗಳನಂತರ: ನಿನ್ನೆ ಬೆಳಗ್ಗೆ ಎದ್ದು ಕೂತೆ. ರಾತ್ರಿ ಬಿದ್ದ ಕನಸಿನ ಅಸ್ಪಷ್ಟ ನೆನಪು. ನನ್ನ ಹಿತೈಷಿಗಳೆಲ್ಲಾ ಚಾವಟಿ ಹಿಡಿದು ವಾಕಿಂಗ್ ಹೋಗು, ಹೋಗ್ತೀಯಾ ಇಲ್ವಾ ಅಂತ ಚಾವಟಿ ನೆಲಕ್ಕೆ ಬಡಿಯುತ್ತಾ ಗ್ರಹಗಳಂತೆ ನನ್ನ ಸುತ್ತಾ ತಿರುಗುತ್ತಿದ್ದರು. ಕನ್ನಡಿಯಲ್ಲಿ ಮುಖ ನೋಡಿಕೊಂಡೆ, ಜಯಲಲಿತಾ ಕಾರ್ಟೂನ್ ತರಹ ಕಾಣಿಸಿತು.ವಾಕಿಂಗ್ ಹೋಗುವ ನಿರ್ಧಾರ ಮಾಡಿದೆ. ಸಂಜೆ ಒಂದು ಸಣ್ಣ ಚೀಲದಲ್ಲಿ ಒಂದು ಬಾಟಲ್ ನಲ್ಲಿ ನೀರು , ಪಾರ್ಕಿನ ಬೆಂಚಲ್ಲಿ ತಂಪಾಗಿ ಕುಳಿತು ಓದಲು ಪುಸ್ತಕ. ಪರ್ಸ್ ಎಲ್ಲಾ ಹಿಡಿದು ಹೊರಟೆ. ಮಗ-ಹೋಗಮ್ಮಾ ಎಲ್ಲರಿಗೂ ಸ್ಫೂರ್ತಿಯಾಗು ಎಂದು ಹಾರೈಸಿದ. ಅದ್ಹೇಗೋ ಅಂದೆ. ಈ ಬಿಡಿನೇ ವಾಕಿಂಗ್ ಬಂದಿರೋವಾಗ ನಮಗಾಗಲ್ವಾ ಅಂತ ಎಲ್ಲರೂ ಇನ್ನೂ ವೇಗವಾಗಿ ವಾಕಿಂಗ್ ಮಾಡ್ತಾರೆ ಅಂದರು ಯಜಮಾನರು. (ಅಂದ್ಹಾಗೆ ಬಿಡಿ ಅಂದರೆ ನಿಮಗೆ ಗೊತ್ತಲ್ಲಾ-ಬುಲ್ ಡೋಜ಼ರ್) ಪಾರ್ಕಿಗೆ ಬಂದೆ. ಮಹಿಳೆಯೊಬ್ಬರು ಸೊಂಟದ ಮೇಲೆ ಕೈಯಿಟ್ಟು ನಿಂತೇ ಬಿಟ್ಟರು. ಯಜಮಾನರ ಮಾತು ಜ್ಞಾಪಕ ಬಂತು. ಅವರನ್ನೇ ಗಮನಿಸುತ್ತಿದ್ದೆ. ನಿಟ್ಟುಸಿರು ಬಿಟ್ಟರು. ಪಕ್ಕದ ಬೆಂಚಿನಲ್ಲಿ ಕೂತರು. ಸಧ್ಯ ಇವಳಷ್ಟು ದಪ್ಪ ಇಲ್ವಲ್ಲ. ನಾನು ವಿರಾಮ ತೊಗೋಬಹುದು.-- ಅವರ ನೋಟ ಹೇಳುತ್ತಿತ್ತು ಇನ್ನೊಬ್ಬರು ಎದುರು ಬಂದರು ನನ್ನನ್ನು ಅಡಿಯಿಂದ ಮುಡಿಯವರೆಗೆ ನೋಡಿದರು. ನಡಿಗೆಯ ವೇಗ ಹೆಚ್ಚಿಸಿದರು. ಇವಳ ಹಾಗಾದರೆ ಗತಿಯೇನು? ಎನ್ನುವ ಆತಂಕ ಅವರ ಕಣ್ಣಲ್ಲಿ ಕಾಣುತ್ತಿತ್ತು. ಅಡ್ಡಡ್ಡ ಹೆಜ್ಜೆ ಹಾಕುತ್ತಾ ಮುಂದೆ ಹೋದೆ. ಎದುರಿಗೆ ಸ್ವಲ್ಪ ದೂರದಲ್ಲಿ ಪುಟ್ಟ ಹುಡುಗನೊಬ್ಬ ಕುಣಿಯುತ್ತಾ ಬರುತ್ತಿದ್ದ. ಎಲ್ಲಿಂದಲೋ ತರುಣಿಯೊಬ್ಬಳು ಓಡಿ ಬಂದು ಮಗುವನ್ನೆತ್ತಿಕೊಂಡಳು. ಲಾರಿಯ ಅಪಘಾತದಿಂದ ಮಗುವನ್ನು ಪಾರು ಮಾಡಿದ ಭಾವ ಅವಳ ಮುಖದಲ್ಲಿತ್ತು. ಮುಂದೆ ಹೋಗಿ ಬೆಂಚಿನ ಮೇಲೆ ಕುಳಿತೆ. ಮಗುವನ್ನೆತ್ತಿಕೊಂಡು ಒಬ್ಬರು ಬಂದರು. ಮಗು ನನ್ನ ನೋಡಿ ನಕ್ಕಿತು. ನಾನು ಚಿಟಿಕೆ ಹಾಕಿದೆ. ಅವರಿಗೆ ಸುಸ್ತಾಗಿತ್ತೇನೋ ಅಜ್ಜಿ ತೊಡೆ ಮೇಲೆ ಕೂತ್ಕೊತೀಯವ್ವಾ ಅಂತ ಕೇಳಿದರು. ಪಾಪ ಅವ್ರಿಗೇನು ಗೊತ್ತು ನನ್ನ ತೊಡೆ ಮೇಲೆ ನನ್ನ ಹೊಟ್ಟೆ ಕೂತಿದೇಂತಾ ಇನ್ನು ಮಗುವಿಗೆಲ್ಲಿ ಜಾಗ.ಮನೆಗೆ ಬಂದೆ. ಎಡಗಡೆಯಿಂದ ನೋಡಿದರೆ ನಿಮ್ಮಮ್ಮ ಒಂದು 100 ಗ್ರಾಮ್ ಕಮ್ಮಿಯಾಗಿದಾಳೆ ಅನ್ಸಲ್ವಾ-ಯಜಮಾನರು. ಬ್ಯಾಗಲ್ಲಿ ನೋಡು ಕೋಡುಬಳೆ, ಕೂತ್ಕೊಂಡು ತಿಂದರೆ, ಡಬಲ್ ಕ್ಯಾಲೊರಿ ವಾಪಸ್--ಮಗ ಈವತ್ತು?