ಸುಖದ ಘಳಿಗೆ
ಸುಮ್ಮನೆ ಕೂತಿದ್ದಾಗ ಅನಿಸಿದ್ದು ಬರೆದಿದ್ದೀನಿ.
ಮನುಷ್ಯರಾಗಿ ನಾವು ಸುಖ ದುಃಖಗಳನ್ನು ಬೇಕಾದಷ್ಟು ಅನುಭವಿಸಿರ್ತೀವಿ. ಸುಖದ ಘಳಿಗೆಗಳನ್ನು ಪಟ್ಟಿ ಮಾಡಿದೀನಿ
ತಾಯ ಮಡಿಲಲ್ಲಿ ಮಲಗಿ ಎದೆಹಾಲ ಕುಡಿಯುವ ಸುಖ
ತಂದೆಯ ತೋಳಲ್ಲಿ ತೂಗುವ ಸುಖ
ಅಜ್ಜಿಯ ಲಾಲಿ ಕೇಳುವ ಸುಖ
ತಾತನ ಕೈಹಿಡಿದು ತಿರುಗಾಡುವ ಸುಖ
ಹಲ್ಲುಜ್ಜಿ ಬಂದು ತಾಯ ಸೆರಗಲ್ಲಿ ಮುಖ ಒರೆಸುವ ಸುಖ
ಅಣ್ಣನಿಂದ ತಲೆ ಮೊಟಕಿಸಿಕೊಳ್ಳವ ಸುಖ
ಬಿದ್ದು ಆದ ಗಾಯಕ್ಕೆ ಅಕ್ಕನಿಂದ ಆಯಿಂಟ್ಮೆಂಟ್ ಹಚ್ಚಿಸಿಕೊಳ್ಳುವ ಸುಖ
ಅಮ್ಮ ಕೊಟ್ಟ ತಿಂಡಿಯನ್ನು ತಂಗಿ ತಮ್ಮಂದಿರೊಂದಿಗೆ ಹಂಚಿಕೊಳ್ಳುವ ಸುಖ
ರಾತ್ರಿ ಪಕ್ಕದಲ್ಲಿ ಮಲಗಿ ಅವರಿಂದ ಒದೆಸಿಕೊಳ್ಳುವ ಸುಖ
ಗೆಳೆಯ/ಗೆಳತಿಯ ಕೈ ಹಿಡಿದು ಶಾಲೆಗೆ ಹೋಗುವ ಸುಖ
ಶಾಲೆಯ ಗಂಟೆ ಬಾರಿಸಿದೊಡನೆ ಹೋ ಎಂದು ಕಿರುಚುತ್ತಾ ಮನೆಗೆ ಓಡುವ ಸುಖ
ಪುಸ್ತಕದ ಬ್ಯಾಗು ಮನೆಯಲ್ಲೆಸೆದು ಆಟಕ್ಕೆ ಓಡುವ ಸುಖ
ಹೊಸದಾಗಿ ಕಲಿತಿದ್ದನ್ನು ಎಲ್ಲರ ಮುಂದೆ ಪ್ರದರ್ಶಿಸುವ ಸುಖ
ನೆಟ್ಟ ಬೀಜ ಮೊಳಕೆಯೊಡೆಯುವುದನ್ನು ನೋಡುವ ಸುಖ
ಮಳೆ ಬರುವ ಮೊದಲ ಮಣ್ಣಿನ ವಾಸನೆಯ ಸುಖ
ಯಾರ ಮಾತೂ ಕೇಳದೆ ಮಳೆಯಲ್ಲಿ ನೆನೆಯುವ ಸುಖ
ಪ್ರಕೃತಿಯ ಬಣ್ಣಗಳಿಗೆ ಬೆರಗಾಗುವ ಸುಖ
ಇಂಪಾದ ಸಂಗೀತ ಕೇಳುವ ಸುಖ
ಹಾಸಿಗೆಯಲ್ಲೊರಗಿ ಕತೆ ಪುಸ್ತಕ ಓದುವ ಸುಖ
ಏಲಕ್ಕಿ ಬೆರೆಸಿದ ನಿಂಬೆ ಪಾನಕ ಕುಡಿಯುವ ಸುಖ
ಚಳಿಯಲ್ಲಿ ಬೆಚ್ಚಗೆ ಕಾಫಿ/ಟೀ ಹೀರುವ ಸುಖ
ಗೆಳೆಯ/ಗೆಳತಿಯರಿಂದ ಛೇಡಿಸಿಕೊಳ್ಳುವ ಸುಖ
ಅತ್ತೆ/ಮಾವರೊಂದಿಗೆ ಚೌಕಾಭಾರ ಆಡುವ ಸುಖ
ಚಿಕ್ಕಪ್ಪ /ಚಿಕ್ಕಮ್ಮರೊಂದಿಗೆ ಕೇರಂ ಆಡುತ್ತಾ ಮೋಸದಿಂದ ರೆಡ್ ಹೊಡೆಯುವ ಸುಖ
ಹಬ್ಬದಲ್ಲಿ ಹೊಸ ಬಟ್ಟೆ ತೊಟ್ಟು ಸಿಹಿಯೂಟ ಮಾಡುವ ಸುಖ
ಗೆಳೆಯ/ಗೆಳತಿಯರೊಡನೆ ಪಾನಿಪುರಿ ತಿನ್ನುತ್ತಾ ಹರಟೆ ಹೊಡೆಯುವ ಸುಖ
ಸಂಗಾತಿ ತೋಳ ದಿಂಬಿನ ಮೇಲೆ ಮಲಗುವ ಸುಖ
ಪುಟ್ಟ ಮಕ್ಕಳನ್ನು ಮುದ್ದಾಡುವ ಸುಖ
ಹದವಾದ ಬಿಸಿ ನೀರಲ್ಲಿ ಸ್ನಾನ ಮಾಡುವ ಸುಖ
ಮನೆಯವರೆಲ್ಲಾ ಕುಳಿತು ಭಾರತ ಕ್ರಿಕೆಟ್ ನಲ್ಲಿ ಗೆಲ್ಲುವುದನ್ನು ಟೀವಿಯಲ್ಲಿ ನೋಡುವ ಸುಖ
ಇತರರ ಸಾಧನೆ ನೋಡಿ ಹೆಮ್ಮೆ ಪಡುವ ಸುಖ
ಕಿರಿಯರ ಪ್ರಗತಿ ನೋಡಿ ಆನಂದಿಸುವ ಸುಖ
ಹಿರಿಯರಿಂದ ತುಂಬು ಹೃದಯದ ಆಶೀರ್ವಾದ ಪಡೆಯುವ ಸುಖ
ಕಿರಿಯರನ್ನು ಮನಸಾರೆ ಹರಸುವ ಸುಖ
ಇದರಲ್ಲಿ ನೀವು ಅನುಭವಿಸಿದ ಸುಖ ನೆನಪಿಸಿಕೊಳ್ಳಿ. ಪಟ್ಟಿಯಲ್ಲಿಲ್ಲದ, ಪಟ್ಟಿಯಲ್ಲಿ ಸೇರಿಸಲು ಆಗದ ಸುಖ ನೆನಪಿಸಿಕೊಂಡು ಖುಷಿಪಡಿ. Be happy today. And always remain so.
Very nice
ReplyDeleteIdanna odode indu sukha👌👌😃
ತುಂಬಾ ಚೆನ್ನಾಗಿದೆ ನಾನು ನನ್ನ ಹಾಳe ನೆನಪು ಇದ್ಧ ನ್ನೇ ನೇನಪಿಸಿಕೊಡೆ ನಂಗೆ ತುಂಬಾ ಇಷ್ಟವಾಯಿತು.
ReplyDelete