Wednesday, June 29, 2022
ನಾನು ಅಮ್ಮನಾಗಲೇ ಇಲ್ಲ
ನೀನು ಹುಟ್ಟಿದಾಗ ನೀನು ದೇವರು ನನಗೆ ಕೊಟ್ಟ ವರಪ್ರಸಾದವಾದೆ
ನಾನು ಭಕ್ತಳಾಗಿ ಸ್ವೀಕರಿಸಿದೆ. ನಾನು ಅಮ್ಮನಾಗಲೇ ಇಲ್ಲ
ನಂತರ ನೀನು ನನಗೆ ಸಿಕ್ಕ ಅಪರೂಪದ ಆಟಿಕೆಯಾದೆ
ನನ್ನ ಮನರಂಜನೆಯ ಸಾಧನವಾದೆ. ನಾನು ಅಮ್ಮನಾಗಲೇ ಇಲ್ಲ.
ನೀನು ಬೆಳೆದ ಹಾಗೆ ನಾನು ನಿನ್ನ ಶಿಕ್ಷಕಿಯಾದೆ
ನೀನು ಗುರುವನ್ನು ಮೀರಿಸುವ ಶಿಷ್ಯನಾದೆ ನಾನು ಅಮ್ಮನಾಗಲೇ ಇಲ್ಲ.
ದಿನ ಕಳೆದಂತೆ ನಾನು ಬೆಂಬಲ ಬೇಡುವ ಅಸಹಾಯಕಳಾದೆ
ನೀನು ಆರೈಕೆ ಮಾಡುವ ತಾಯಿಯಾದೆ ನಾನು ಅಮ್ಮನಾಗಲೇ ಇಲ್ಲ.
ಈಗ ನಾನು ಅದು ಬೇಕು ಇದು ಬೇಕು ಎಂದು ಬೇಡುವ ಮಗುವಾದೆ
ನೀನು ಎಲ್ಲವನ್ನೂ ಒದಗಿಸುವ ತಂದೆಯಾದೆ. ಕೊನೆಗೂ ನಾನು ಅಮ್ಮನಾಗಲೇ ಇಲ್ಲ.
Subscribe to:
Post Comments (Atom)
No comments:
Post a Comment