Sunday, August 2, 2009
ನೆನಪಿನ ಜಾತ್ರೆ
ಇವತ್ತು friendship day. ನನ್ನ ಮಗ friendship band ತಂದು ಅವನ ಗೆಳೆಯ ಗೆಳತಿಯರಿಗೆಲ್ಲಾ ಕಟ್ಟಿ ಸಂಭ್ರಮ ಪದುತ್ತಿದ್ದಾಗ ನನ್ನ ಮನ ಬಾಲ್ಯಕ್ಕೆ ಓಡಿತು. ನನ್ನ ಮೊದಲ ಗೆಳತಿ ದೇವಿಯ ನೆನಪಾಯಿತು. ಅವಳು ನನಗಿಂತಾ ದೊಡ್ಡವಳು. ಒಂಥರಾ ನನ್ನ gaurdian angel. ಶಾಲೆಯಲ್ಲಿ ಸದಾ ಅವಳ ಜೊತೆಯಲ್ಲೇ ಇರುತ್ತಿದ್ದೆ. ಅವಳು ಊರು ಬಿಟ್ಟು ಹೋದದ್ದೇ ನನ್ನ ಮೊದಲ ಅಗಲಿಕೆಯ ಅನುಭವ. ಅಳುತ್ತಾ ನಿಂತಿದ್ದ ನನಗೆ ಅವಳಿಗೆಂದು ಇಟ್ಟುಕೊಂಡಿದ್ದ ಪೂರ್ಣ ಕಳಿತ ಬಾಳೆಹಣ್ಣು ಕೊಟ್ಟು ಸಮಾಧಾನ ಮಾಡಿದ ನೆನಪು ಸದಾ ಹಸಿರು.ಹೆಸರಿಗೆ ತಕ್ಕಂತೆ ತುಂಬುಗೂದಲಿನ ಕೃಷ್ಣವೇಣಿ, ಅಕ್ಕನಿಗೆ ಹೆದರಿ (ಅವರಕ್ಕ ನಮ್ಮಕ್ಕ ಠೂ ಬಿಟ್ಟಿದ್ದರು) ಒಮ್ಮೊಮ್ಮೆ ಮಾತ್ರ ಆಡಲು ಬರುತ್ತಿದ್ದ ಕಲಾ ಗಾಳಿಪಟ ಮಾಡಿಕೊಡುತ್ತಿದ್ದ ಮಲ್ಲೇಶ, ಜೊತೆಯಲ್ಲಿ ಆನೇಕಲ್ಲು ಆಡುತ್ತಿದ್ದ ಸಲ್ಮಾ, ಶಾಲೆಯಲ್ಲಿ ರ್ಯಾಂಕ್ ಗೆ ಪೈಪೋಟಿ ಮಾಡುತ್ತಿದ್ದ ಆನಂದ , ನಾಗರಾಜ, ಜಾರುಬಂಡೆಯಿಂದ ಬೀಳಿಸಿದ ನಂದ, ಕುಂಟೆಬಿಲ್ಲೆಯಲ್ಲಿ ಸದಾ ಸೋಲುತ್ತಿದ್ದ ವಿಜಿ, ಪಾರ್ವತಿ ಎಷ್ಟೊಂದು ಗೆಳೆಯರು ಎಷ್ಟೊಂದು ನೆನಪುಗಳು. ನನ್ನ ಬಾಲ್ಯವನ್ನು ಚಿರಸ್ಮರಣೀಯವಾಗಿ ಮಾಡಿದ ಈ ಎಲ್ಲ ಗೆಳೆಯರಿಗೆ ನನ್ನ ಧನ್ಯವಾದಗಳು. ಎಲ್ಲರಿಗೂ ಸ್ನೇಹಿತರ ದಿನದ ಶುಭಾಶಯಗಳು.
Subscribe to:
Post Comments (Atom)
No comments:
Post a Comment